ಪೂದಾನಂ ನಂಬೂದಿರಿ - 
ಮೇಲ್ಪುತ್ತೂರ್ ನಾರಾಯಣ ಭಟ್ಟತ್ತಿರಿಯ ಸಮಕಾಲೀನನಾದ ಭಕ್ತಕವಿ. 16ನೆಯ ಶತಮಾನದವ. ಹೆಸರಿನ ಬಗ್ಗೆ ಸತ್ಯಾಂಶ ದೊರೆಯದೇ ಹೋದರೂ ಮಲ್ಲಪುರಂ ಜಿಲ್ಲೆಯ ಪೆರಿಂದಲ್‍ಮಣ್ಣ ತಾಲ್ಲೂಕಿಗೆ ಸೇರಿದ ನೆನ್ಮೇನಿಯವ. ದೀರ್ಘಕಾಲದವರೆಗೆ ಗುರುವಾಯೂರದ ದೇವಸ್ಥಾನದಲ್ಲಿ ಭಜನೆ ಮಾಡುತ್ತಾ ಕಾಲ ಕಳೆದ. ವೃದ್ಧಾಪ್ಯದಲ್ಲಿ ಅಲ್ಲಿರಲಾಗದು ಎಂದು ಹೊರಡುವ ಸಂಕಲ್ಪ ಮಾಡಿದಾಗ ಅಶರೀರವಾಣಿಯೊಂದು 'ನಾನಲ್ಲಿ ಹೊರಗಿರುವೆ ಎಂದು ನುಡಿಯಿತಂತೆ. ಅದೇ ಪೂದಾನಂ ಕವಿತೆಗಳಲ್ಲಿ ಬರುವ ವಾಮಪುರ.

	ಒಮ್ಮೆ ಮೇಲ್ಪುತ್ತೂರೆ ಇವನ ಸಂಸ್ಕøತ ಪಾಂಡಿತ್ಯವಿಹೀನತೆಯನ್ನು ಹಳಿದಾಗ ಗುರುವಾಯೂರಪ್ಪನ್ ರಾತ್ರಿ ಸ್ವಪ್ನದಲ್ಲಿ ಬಂದು ಭಟ್ಟತ್ತಿರಿಯ ಭಕ್ತಿಯಲ್ಲಿ ಪೂದಾನಂ ಕವಿಯ ಭಕ್ತಿಯೇ ತನಗೆ ಇಷ್ಟ ಎಂದು ತಿಳಿಸಿ ಹೇಳಿದ್ದಾಗಿ ಐತಿಹ್ಯವಿದೆ. ದುಷ್ಟರಿಂದ ರಕ್ಷಿಸುವುದಕ್ಕಾಗಿ ಪೂದಾನಂ ಬಳಿಗೆ ಅಚ್ಯುತ ಮಙ್ಞೂಟ್ಟಚ್ಚನಾಗಿ ಬಂದುದ್ದು ಶ್ರೀ ವಿಷ್ಣುವಿನ ಹನ್ನೊಂದನೆಯ ಅವತಾರವೆಂದು ಮತ್ತೊಂದು ಕಥೆಯಿದೆ.

	ನಂಬೂದರಿಯ ಒಂದು ಮಗು ಅದರ ಅನ್ನಪ್ರಾಶಾನದಂದು ಸತ್ತು ಹೋದಾಗ ವೈರಾಗ್ಯದಿಂದ ಬರೆದ ಕೃತಿಯೇ ಜ್ಞಾನಪ್ಪಾನ ಎಂಬ ಹೇಳಿಕೆಯಿದೆ. ಕುಮಾರಹರಣಂ (ಸಂತಾನ ಗೋಪಾಲಂ) ಪಾನ, ಭಾಷಾ ಕರ್ಣಾಮೃತಂ, ಪಾರ್ಥಸಾರಥಿಸ್ತವಂ ಘನಸಘಂ, ನರಾಯಣ ಕೀರ್ತವಜ್ಞಳ್, ದಶಾವತಾರ ಸ್ತೋತ್ರಂ, ವಿವೇಕೋದಯ ಕೀರ್ತನಂ ಮೊದಲಾದ ಅಸಂಖ್ಯ ಕೃತಿಗಳನ್ನು ಈತ ರಚಿಸಿದ್ದಾನೆ. ಭಕ್ತಿ ಮಾರ್ಗದ ಕೆಲ ತಮಿಳು ಕೃತಿಗಳನ್ನೂ ರಚಿಸಿದ್ದಾನೆನ್ನುವ ಹೇಳಿಕೆಯಿದೆ. ಲಾಲಿತ್ಯ ಭಕ್ತಿ ಕಾವ್ಯ ಸೌಂದರ್ಯಗಳಿಂದ ಕೂಡಿದ ಇವನ ಹೆಚ್ಚಿನ ಕೃತಿಗಳಲ್ಲಿ ವಾಮಪುರೇಶಂ ಎಂಬ ಅಂಕಿತವಿದೆ.

		ಜನ್ಮಸ್ಥಳವಾದ ಕೀ¿ೂಟ್ಟೂರಿನಲ್ಲಿ ಈಗ ಈತನ ಹೆಸರಿನಲ್ಲಿ ಶಾಲೆ, ವಾಚನಾಲಯಗಳಿವೆ. ಇವುಗಳ ಜೊತೆಗೆ ಈತನ ನೆನಪಿಗಾಗಿ ಒಂದು ಸ್ಮಾರಕ ರಚಿಸುವುದಕ್ಕೆ ಸರ್ಕಾರ ತೀರ್ಮಾನಿಸಿದೆ.    					(ಬಿ.ಕೆ.ಟಿ.) 
(ಪರಿಷ್ಕರಣೆ: ಫಕೀರ್ ಮಹಮ್ಮದ್ ಕಟ್ಪಾಡಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ